ಆರು ತಲೆಮಾರಿನ ಹಿಂದಿನ ಕಥೆ ಸಾರುವ ಕಡಸಾಲೆ
ಬ್ರಿಟಿಷರ ವಿರುದ್ಧ ಹೋರಾಡಿದ ಕಟ್ಟಬಳೆ ಅಂತಮ್ಮಾ ಶೆಡ್ತಿ ಇಳಿ ವಯಸ್ಸಿನ ಕಾಲವದು.
ಮೂಲ ನಾಗಮ್ಮ ಶೆಡ್ತೇರ ಕವರಿನಲ್ಲಿ 9 ಜೋಡಿ ಮನೆ ಮದುವೆ ಸಂಭ್ರಮದ ಸಡಗರ. ರಾತ್ರಿ
ತನ್ನ ಇಳಿ ವಯಸ್ಸಿನಲ್ಲಿ ಕಟ್ಟಬಳೆ ಅಂತಮ್ಮಾ ಶೆಡ್ತಿರು ಒಬ್ಬರೆ ಮನೆಯಲ್ಲಿ ಮಲಿಗಿರುವ
ಸಮಯ. ದತ್ತು ಪುತ್ರಿ ಮಂಜಮ್ಮ ಶೇಡ್ತಿಯವರು ಮತ್ತು ತಂಗಿ ನಾಗಮ್ಮ ಶೇಡ್ತಿಯವರ ಮೂಲಮನೆ
ಯಲ್ಲಿ ಚಂದಯ್ಯ ಶೆಟ್ರ ಯಜಮಾನಿಕೆಯಲ್ಲಿ ಮನೆಮದುವೆಯಲ್ಲಿ ಇದ್ದರು. ಇತ್ತ ಕಟ್ಟಬಳೆ
ಅಂತಮ್ಮಾ ಶೆಡ್ತೇರು ಮಲಗಿರುವ ಕೋಣೆಗೆ ಕಳ್ಳ ನುಗ್ಗಲು ಪ್ರಯತ್ನನಿಸುತ್ತಿದ್ದ. ಕಳ್ಳ
ನಾಗಮ್ಮ ಶೇಡ್ತಿಯವರ ಮನೆಯಲ್ಲಿ ಎಲ್ಲರು ಸೇರಿರುದನ್ನು ನೋಡಿ, ಅಲ್ಲೆ ಇದ್ದ ಕಡಸಾಲೆ
ಕದ್ದು ತಂದು ಪಕ್ಕದ ಅವರ ಅಕ್ಕನ ಮನೆ ಕೊರೆಯಲು ಪ್ರಯತ್ನಿಸಿದ. ಆಗ ಗಟ್ಟಿಗಿತ್ತಿ
ಕಟ್ಟಬಳೆ ಅಂತಮ್ಮಾ ಮಲಗಿದ ಕೋಣೆಯಿಂದ ಆಳುಗಳನ್ನು ಕಿರುಚಿ ಕರೆಯುತ್ತಾ, " ಎ..ಸುಬ್ಬ,
ಬಸುವ, ನಾರಾಯಣ... ಎಂತ ಎಲ್ಲ ಮಲಗಿರಿಯನ.. ಕಳ್ಳ ಮನೆ ಕದುಕೆ ಬಂದಿದ್ದ.. ಹೊಯ್
ಹಿಡಿನ ಆವ್ನನ್ನ " ಅಂತ ಕೂಗಿ ಕರೆಯುತ್ತಾರೆ. ಅದನ್ನು ಕೇಳಿದ ಕಳ್ಳ ಓಡಿ ಹೋಗುವಾಗ
ಪಕ್ಕದ ಮನೆಯಲ್ಲಿ ಕದ್ದ ಕಡಸಾಲೆಯನ್ನ ಮರೆತು ಬಿಟ್ಟು ಹೋಗುತ್ತಾನೆ ಅನ್ನುದು
ಪ್ರತೀತಿ. ಆರನೇ ತಲೆಮಾರಿನ ಕಡಸಾಲೆ ಇವತ್ತು ಕೂಡ ಅಟ್ಟದ ಮೇಲೆ ಕೂತು ಹಿಡಿದು
ನೋಡುವವ್ರನ್ನ ಹುಡುಕುತ್ತಿದೆ.