ಕಂದಾವರ ಕೆಳಮನೆ
ಈಗ ಉಪಲಬ್ದ ಇರುವ ದಸ್ತಾವೇಜುಗಳನ್ನು ತಾಳೆ ಹಾಕಿ ನೋಡಿದಾಗ, ಕಂದಾವರ ಕೆಳಮನೆಯವರ
ನಾಡವ ಮನೆತನವು ಕ್ರಿ. ಸ. ೧೭೦೦ರ ಆಸುಪಾಸಿನಲ್ಲಿ ಸುಮಾರು ₹೧೫೦ ಬೆರೆಜ್ ತೀರ್ವೆ
ಭೂಮಿಯ ಜಮೀನ್ದಾರರು. ನಾವು ಮೂಲದಲ್ಲಿ ಕಂದಾವರದವರು ಅಂಥ ಕರೆಸಿ ಕೊಳ್ಳಲು ಕಾರಣ,
ಕಂದಾವರ ಗ್ರಾಮಕ್ಕೆ ತಾಗಿ ವಾರಾಹಿ ನದಿಯ ದಂಡೆಯಲ್ಲಿರುವ ಫಲವತ್ತಾದ ಕುದ್ರು
(ಬಳ್ಕೊಂಡು ಬಂದ ಕುದ್ರು - ಬಳ್ಕೂರು) ಶೃಂಗೇರಿ ಮಠದವರು ೧/೩ ಅಂಶ ಮತ್ತು ೨/೩ ಉಳಿದ
ಅಂಶ ‘ಯಾಡ್ತರೆ ನಾಡವ’ ಮನೆತನದವರು ಬ್ರಿಟಿಷ್ ಸರ್ಕಾರಕ್ಕೆ ತಿರ್ವೆ ಕಟ್ಟಿ
ಪಡೆದುಕೊಂಡ ಕುದ್ರು ಭೂಮಿ ಈಗಿನ ಬಳ್ಕೂರು. ಕಂದಾವರ (ಕಂದಾ - ಸಿಹಿ ಗೆಣಸು, ವರ-ಫಲ)
ಗ್ರಾಮಕ್ಕೆ ತಾಗಿಕೊಂಡು ಇರುವ ಫಲವತ್ತಾದ ಕುದ್ರು (ಬಳ್+ಕುದ್ರು) ಕಾಲಕ್ರಮೇಣ
“ಬಳ್ಕೂರು” ಆಗಿ ಭಾಷಾಂತರ ಹೊಂದಿತು. ಯಾಡ್ತರೆ ಮನೆತನದ ಒಡೆತನದ ಭೂಮಿಯಲ್ಲಿ ಅಲ್ಲಿನ
ಹೆಣ್ಣುಮಗಳು ಪಾಲು ತೆಗೆದು ಕೊಂಡು ಕಂದಾವರದ ತನ್ನ ಪಿತ್ರಾರ್ಜಿತ ಭೂಮಿಯಲ್ಲಿ
ಮನೆಕಟ್ಟಿ ನೆಲೆಸಿದ್ದಕ್ಕಾಗಿ ಕಂದಾವರದವರು ಅನ್ನುವ ಕುಲನಾಮವಾಯಿತು. ಮೂಲದಲ್ಲಿ
ಕಂದಾವರ ಗ್ರಾಮದ ಶರಹದ್ದಿನಲ್ಲಿ ಇರುವ ಕುಂಜಾಡಿ ದೊಡ್ಡಮನೆ ಕಾಲಕ್ರಮೇಣ ಏಳು
ಹೆಣ್ಣಿನಿಂದ ಪಾಲಾಗಿ ಕಂದಾವರದ ಏಳು ಮನೆ ಆಯಿತು.
ನಾವು ಮೂಲ ಯಡ್ತರೆಯಿಂದ ಪಿತ್ರಾರ್ಜಿತ ಪಾಲಿನಲ್ಲಿ ಕಂದಾವರಕ್ಕೆ ಬಂದು ನೆಲೆಸಿದವರು.
ಮೂಲದಲ್ಲಿ ಹಿರಿಯ ಬುಡ ಕುಂಜ್ಞಾಡಿ ಮನೆಯಲ್ಲಿ ನೆಲೆ ಕಂಡವರು. ಏಳು ಹೆಣ್ಣಿನ ಪೈಕಿ,
ಹಿರಿಯ ಹೆಣ್ಣು ೧ನೇ ಕುಂಜ್ಞಾಡಿ ಮನೆ, ೨ನೇ ಹೆಬ್ಬಾಗಿಲು ಮನೆ, ೩ನೇ ದಿಂಡ್ಕಲ್ ಮನೆ,
೪ನೇ ಕೆಳಮನೆ, ೫ನೇ ಅರೆಕಲ್ ಮನೆ, ೬ನೇ ಗುಂಡಾಡಿ ಮನೆ ಮತ್ತು ೭ನೇಯವರು ಕೊಂಗವಳ್ಳಿ
ಮನೆಯಲ್ಲಿ ನೆಲೆಕಂಡರು. ಏಳು ಹೆಣ್ಣು ಮತ್ತು ಎರಡು ಗಂಡಿನ ಪೈಕಿ, ನಾಲ್ಕನೆ ಹೆಣ್ಣು
ಕೆಳ ಬಳ್ಕೂರಿನ ವಾರಾಹಿ ನದಿಯ ಸಮೀಪ ಮನೆಕಟ್ಟಿ ನೆಲೆಸಿದ್ದರಿಂದ ಕಂದಾವರ ಕೆಳಮನೆಯವರು
ಅನ್ನುವ ಹೆಸರು ಮನೆತನಕ್ಕೆ ನಾಮಾಂಕಿತವಾಹಿತು. ನಮ್ಮ ಮೂಲ ಕೆಳಮನೆಯ ಸಿಹಿ ನೀರಿನ
ಬಾವಿಯು ಹತ್ತಿ ಮರದ ಚೌಕಟ್ಟುನ್ನು ಹೊಂದಿದ್ದು, ಕಾರ್ಬನ್ ಡೇಟಿಂಗ್ ಮಾಡಿಸಿದರೆ
ನಿಕರವಾಗಿ ಸುಮಾರು ೩೦೦ ವರ್ಷಗಳ ಇತಿಹಾಸದ ಸಾಕ್ಷಿ ಸಿಗಬಹುದು. ವಂಶವೃಕ್ಷದ ಪ್ರಕಾರ
ಆರು ತಲೆಮಾರುಗಳ ಹಿಂದೆ, ಕಂದಾವರದಲ್ಲಿ ಕಟ್ ಬಳೆ ಅಂಥಮ್ಮ ಶೆಡ್ತಿ ಮತ್ತು ಅವರ ತಂಗಿ
ಕೇರಳದ ಕಾಸರಗೋಡಿನಲ್ಲಿರುವ ಕಂದಾವರ ಬಂಟ ನಿ-ಸಂತತಿ ಕವರಿಗೆ ಮದುವೆಯಾದ ಕಂದಾವರ
ಮುತ್ತಮ್ಮ ಶೆಡ್ತಿಯವರು ಇದ್ದರು. ಅಪರೂಪದ ಹರಕೆ ಎಂಬಂತೆ, ಕುಟುಂಬದ ತಿರುಪತಿ
ಯಾತ್ರೆಯಲ್ಲಿ ಕಂದಾವರ ಕೆಳಮನೆಯು ಇದ್ದ ಎರಡು ಹೆಣ್ಣು ಸಂತಾನ ಕಳೆದುಕೊಂಡು
ನಿರ್ವಂಶವಾಹಿತು. ಎರಡು ಹೆಣ್ಣು ಸಂತಾನವನ್ನು ಕುಟುಂಬ ಯಾತ್ರೆಯಲ್ಲಿ ಕಳೆದುಕೊಂಡ
ಕಟ್ಟಬಳೆ ಅಂಥಮ್ಮಾ ಶೆಡ್ತೇರು ಮತ್ತು ಕಾಸರಗೋಡಿಗೆ ಮದುವೆ ಆದ ಅವರ ತಂಗಿ ಮುತ್ತಮ್ಮ
ಶೆಡ್ತಿ ಸುಮಾರು ೩೦ ವರ್ಷದಿಂದ ಸಂತಾನವಿಲ್ಲದೆ ಚಿAತೆಯಲ್ಲಿ ಇದ್ದರು. ಮೂಲ
ಕುಂಜ್ಞಾಡಿ ಮನೆಯಿಂದ ದತ್ತು ತರುವ ಆಲೋಚನೆಯಲ್ಲಿ ಇರುವಾಗ, ತಂಗಿ ಮುತ್ತಮ್ಮ ಶೆಡ್ತಿ
ತನ್ನ ಮದ್ಯ ವಯಸ್ಸಿನಲ್ಲಿ, ತುಂಬಾ ವರ್ಷಗಳ ನಂತರ ಮೊದಲ ಗರ್ಭದಲ್ಲಿ ಮಂಜಮ್ಮನನ್ನು
ಪುನಃ ಎರಡನೇ ಗರ್ಭದಲ್ಲಿ ನಾಗಮ್ಮನನ್ನು ಮತ್ತು ಕೊನೆಯ ಗರ್ಭದಲ್ಲಿ ಲಕ್ಷ್ಮಿ ಎನ್ನುವ
ಮೂರು ಹೆಣ್ಣು ಮಕ್ಕಳನ್ನ ಪಡೆಯುತ್ತಾಳೆ! ನಿಸಂತತಿ ಕಟ್ಟಬಳೆ ಅಂಥಮ್ಮ ಶೆಡ್ತರಿಗೆ
ತನ್ನ ತಂಗಿ ಮುತ್ತಮ್ಮನಿಗೆ ಸಂತಾನಭಾಗ್ಯ ದೊರತದ್ದು ದೇವರು ಕೊಟ್ಟ ವರ ಅನ್ನುವಷ್ಟು
ಖುಷಿಕೊಟ್ಟಿತು. ಮುತ್ತಮ್ಮನ ಹಿರಿಯ ಮಗಳು ಮಂಜಮ್ಮನನ್ನು ಮುದ್ದಿನಿಂದ ದತ್ತು
ತೆಗೆದುಕೊಂಡು ಕಟ್ಟ್ ಬಳೆ ಅಂಥಮ್ಮ ಶೆಡ್ತರು ಪೋಷಿಸುತ್ತಾರೆ. ಅತ್ತ ಕಾಸರಗೋಡಿನ
ನಿಸಂತತಿ ಕವರಿನ ಯಜಮಾನ ಶೆಟ್ರ ಕಾಲನಂತರ ಮುತ್ತಮ್ಮ ಶೆಡ್ತಿಯವರು ಕಂದಾವರ
ಕೆಳಮನೆಯಲ್ಲಿ ತನ್ನ ಮಕ್ಕಳೊಂದಿಗೆ ಕಾಸರಗೋಡಿನ ನಿ-ಸಂತತಿ ಕವರಿನ ದೈವ ದೇವರೊಂದಿಗೆ
ಬಂದು ಕೆಳಮನೆಯ ಮೂಲ ಮನೆಯ ಪಾಲಿನಲ್ಲಿ ಮಕ್ಕಳು ನಾಗಮ್ಮ ಶೆಡ್ತಿ ಮತ್ತು ಲಕ್ಷ್ಮಿ
ಶೆಡ್ತಿಯೊಂದಿಗೆ ಮೂಲ ಮನೆಯವರಾಗಿ ಕುಟುಂಬದ ಒತ್ತಾಯದೊಂದಿಗೆ ಬಂದು ನೆಲೆಸಿದರು.
ಕೇರಳದ ಕಾಸರಗೋಡಿನ ಪ್ರಸಿದ್ಧ ಬಂಟರ ಮನೆತನದ ನಿ-ಸಂತತಿ ಕವರಿನ ಕುಟುಂಬದ ಮೂಲ “ವರ್ತೆ
ಪಂಜುರ್ಲಿ” ಯು ಕಂದಾವರ ಕೆಳಮನೆಯ ಮುಖಾರದಲ್ಲಿ ಆರಾಧಿಸಿಲ್ಪಡುವ ಮನೆದೈವ ಆಯಿತು.
ಹಿಂದಿನ ಪಾಲುಗಾರಿಕೆಯಲ್ಲಿ ಹಿರಿಯ ಮಗಳು ದತ್ತು ಪುತ್ರಿ ಆದುದ್ದರಿಂದ, ಕಿರಿಯ ಮಗಳು
ಲಕ್ಷ್ಮಿ ಶೆಡ್ತಿ ಮತ್ತು ಯಜಮಾನ ಮೊಳಹಳ್ಳಿ ಮೆಲ್ ಹೆಸಿನಕಟ್ಟೆ ಮಂಜಯ್ಯ ಶೆಟ್ರ ಮಗನಾದ
ಧನಿಕ ಚಂದ್ಯಯ ಶೆಟ್ರರಿಗೆ ಅಳಿಯ ಸಂತಾನ ಕಟ್ಟಿನ ಮನೆತನದ ಯಜಮಾನಿಕೆ ಸಿಕ್ಕಿತು.
ಸುಮಾರ ೧೨೦ ವರ್ಷದ ಹಿಂದೆ ಏಳು ಊರಿನ ಒಡೆಯ ಚಂದ್ಯಯ ಶೆಟ್ರ ಯಜಮಾನಿಕೆಯ ನಂತರ
ಲಕ್ಷ್ಮಿ ಶೆಡ್ತಿ ಕವರಿನವ್ರು ನಿಸಂತತಿಯಾದ ಕಾರಣ “ವರ್ತೆ ಪಂಜುರ್ಲಿ”ಯ ಆಚರಣೆಗಳು
ಅಜೀರ್ಣ ಸ್ಥಿತಿಗೆ ತಲುಪಿದವು. ಇದಕ್ಕೆ ನಿದರ್ಶನ ಎನ್ನುವಂತೆ ಬಸ್ರುರಿನ ಪಂಜುರ್ಲಿ
ಗರಡಿ ಮನೆಯಲ್ಲಿ ಈವಾಗಲೂ ನೆಡೆಯುವ ದೈವಿಕ ಆಚರಣೆಯಲ್ಲಿ “ಕಂದಾವರ ಕೆಳಮನೆ”ಗೆ
ಸಂಬಂಧಪಟ್ಟ ಕಳಸವನ್ನು ಪ್ರತಿಸ್ಥಾಪಿಸಿ ಪೂಜಿಸಲ್ಪಡುತ್ತಿದೆ. ವರ್ಷಂಪ್ರತಿ ನಡೆಯುವ
ಹೊಸ ಅನ್ನದ ಊಟಕ್ಕೆ ಮೊದಲು ಪಂಜುರ್ಲಿ ಗರಡಿಮನೆಯಿಂದ ಪ್ರಸಾದ ಬಂದಮೇಲೆ ಎಡೆ ಇಟ್ಟು
ಊಟ ಮಾಡುವ ಕ್ರಮ ಈವಾಗಲೂ ಜಾರಿಯಲ್ಲಿದೆ. ಮನೆ ಮುಕಾರ ಮತ್ತು ಸಂತತಿ ನಶಿಸಿ ಹೋದಾಗ,
ಆಚರಣೆ ಮುಂದುವರಿಸುವ ಜವಾಬ್ದಾರಿ ಇಲ್ಲದ ಸ್ಥಿತಿ ಏರ್ಪಟ್ಟು, ಕೆಳಮನೆಯ ಪಂಜುರ್ಲಿಯ
ಕಳಸ ಬಸ್ರುರು ಪಂಜುರ್ಲಿ ಗರಡಿಗೆ ಕೊಟ್ಟಿರ ಬಹುದು!
ನಮ್ಮ ದತ್ತು ಸಂತತಿ, ದತ್ತು ಮಗಳಾದ ಮಂಜಮ್ಮ ಶೆಡ್ತಿಯವರ ಹೆಣ್ಣು ಮಕ್ಕಳ ಪೈಕಿ
ಕಂದಾವರದ ಅಜ್ಜಿ, ಕುಕ್ಕೆಹಳ್ಳಿ ಅಜ್ಜಿ, ಬ್ರಹ್ಮವರ ಅಜ್ಜಿ, ಹರ್ಕುರ್ ಅಜ್ಜಿ,
ಹಿಲಿಯಾಣ ಅಜ್ಜಿ ಮತ್ತು ಕೊನೆಯ ಮಗ ಯಜಮಾನ ಕುಮಾರ ಶೆಟ್ಟಿಯವರೊಂದಿಗೆ ೫ ಹೆಣ್ಣು, ೧
ಗಂಡು. ಕಂದಾವರದ ಅಜ್ಜಿಯವರ ಮಕ್ಕಳಾದ ಸಾಗರ ಮತ್ತು ಆಜ್ರಿಯವರ ಅಜ್ಜಿ ಬಾಗಿರತಿಯಮ್ಮ,
ಗಾಂಧಿ ರಾಮಣ್ಣ ಶೆಟ್ರ ತಾಯಿ ಮುತ್ತಮ್ಮ, ಕುಷ್ಟಪ್ಪ ಶೆಟ್ರ ತಾಯಿ ಪದ್ಧಮ್ಮ ಮತ್ತು
ಕಂದಾವರದ ಸದೀಯಮ್ಮ ಶೆಡ್ತಿ ಮತ್ತು ಅಂಥಮ್ಮ ಶೆಡ್ತರ ತಾಯಿ ಕೊನೆಯ ಶೇಷಮ್ಮ ಸೇರಿ ೪
ಹೆಣ್ಣು ಮತ್ತು ೫ ಗಂಡು ಮಕ್ಕಳು. ಈ ಹಿಂದೆ, ದೈವಿಕ ಆರಾಧಕರಾದ ಕುಮಾರ ಶೆಟ್ರಿಗೆ
ಸ್ವಪ್ನದಲ್ಲಿ ಮಹಾಕಾಳಿ ಸ್ವರೂಪ ಗೋಚರವಾದ ಕಾರಣ ವೈದಿಕರ ಮುಖೇನ ವಿಮರ್ಶೆಸಿದಾಗ
ಮೂರ್ತಿ ಸಿಕ್ಕಿದ ಜಾಗದಲ್ಲೇ ಮಹಾಕಾಳಿಯ ಸನ್ನಿದಾನವನ್ನ ನಿರ್ಮಾಣಮಾಡಲಾಯಿತು.
ರುದ್ರಸ್ವರೂಪಿಯಾದ ಮಹಾಕಾಳಿಯು ಗ್ರಾಮದೈವವಾಗಿ ಯಜಮಾನ ಹೈಗೂಳಿ ಸಪರಿವಾರದೊಂದಿಗೆ
ಕಂದಾವರದ ಏಳುಮನೆ ಹಾಗೂ ಗ್ರಾಮಸ್ಥರ ಗ್ರಾಮ ದೇವತೆಯಾಗಿ ನೆಲೆಸಿದಳು.
ಮನೆಮಗ ಮತ್ತು ಧನಿಕ ಚಂದ್ಯಯ ಶೆಟ್ರ ಅಳಿಯ ಗಾಂಧಿ ರಾಮಣ್ಣ ಶೆಟ್ರು ಅವಿಬಜಿತ ದಕ್ಷಿಣ
ಕನ್ನಡ ಜೆಲ್ಲೆಯ ಅಪರೂಪದ ಮತ್ತು ಈ ಭಾಗದ ಪ್ರಸಿದ್ಧ ಸ್ವಾತಂತ್ರ ಹೋರಾಟಗಾರರಲ್ಲಿ
ಒಬ್ಬರು. ಕಂದಾವರದ ಕೆಳೆಮನೆಯ ಹಿರಿಯ ಗಟ್ಟಿಗಿತ್ತಿ ಕಟ್ಟಬಳೆ ಅಂಥಮ್ಮ ಶೆಡ್ತಿಯವರು
ಕಟ್ಟು ಬಳೆಯಲ್ಲಿ ಮುಷ್ಟಿ ಕಟ್ಟಿ ಬ್ರಿಟಿಷ ಚಡ್ಡಿ ಪೊಲೀಸರನ್ನು ಹಿಂಮೆಟ್ಟಿಸಿದ ಕಥೆ
ಪ್ರಚಲಿತದಲ್ಲಿದೆ. ಅವರಿಗೆ ಬ್ರಿಟಿಷರು ಇಟ್ಟ ನಾಮ “ಕಟ್ಟು ಬಳೆ” ಅಂಥಮ್ಮ
ಶೆಡ್ತಿಯವರು ಎಂದು ಕರೆಯುವಲ್ಲಿ ಆರು ತಲೆಮಾರು ಆದರೂ ನಾವು ಕುಟುಂಬಿಕರು ಅವರನ್ನು
ಇಂದಿಗೂ ನೆನಪಿಸಿಕೊಳ್ಳುತ್ತಿದ್ದೇವೆ. ಹಾಗೆ ದೇಶಸೇವೆಯಲ್ಲಿ ಇತ್ತೀಚಿಗೆ ಭೂಸೇನೆಯಿಂದ
ನಿವೃತ್ತಿ ಹೊಂದಿದ ಯೋಧ ಕಂದಾವರ ಸಂತೋಷ್ ಶೆಟ್ಟಿಯವರು ಕೂಡ ನಮ್ಮ ಕುಟುಂಬದವರು.
ಹಾಗಾಗಿ ಕೆಳೆಮನೆಯ ರಕ್ತಗುಣ ಎಂಬಂತೆ ದೇಶ ಸೇವೆಯ ನೈಜ ಒಲೈಕೆ ಮತ್ತು ಪರಕೀಯರಿಂದ
ಸ್ವತಂತ್ರರಾಗಲು ಹಿರಿಯರು ತೋರಿದ ಪರಾಕ್ರಮ ಊರೆಲ್ಲ ಜನಜನಿತವಾಗಿದೆ.
ನಮ್ಮ ದತ್ತು ಕೊಟ್ಟ ಮೂಲದ ಸಂತತಿ ಮುತ್ತಮ್ಮ ಶೆಡ್ತಿಯವರ ಮಗಳು ನಾಗಮ್ಮ ಶೆಡ್ತೇರ ಕವರಿನಲ್ಲಿ ಐದು ಗಂಡು ಒಂದು ಹೆಣ್ಣು. ನಾಗಮ್ಮ ಶೆಡ್ತೇರ ಮಗಳು ಕಸ್ತೂರಿ ಶೆಡ್ತಿ, ಕಸ್ತೂರಿ ಶೆಡ್ತರ ಮಗಳು ವೆಂಕಮ್ಮ ಶೆಡ್ತಿ, ವೆಂಕಮ್ಮ ಶೆಡ್ತರ ಮಗಳು ಸಾದಮ್ಮ ಶೆಡ್ತಿ, ಸಾದಮ್ಮ ಶೆಡ್ತೇರ ಮಗಳು ದೇವಕಿ ಶೆಡ್ತಿ. ದೈವ ಇಚ್ಛೆ ಎನ್ನುವಂತೆ ದತ್ತು ಕೊಟ್ಟ ನಂತರ ಆರು ತಲೆ ಮಾರಿನಿಂದ ಏಕಮಾತ್ರ ಸಂತತಿ ನಾಗಮ್ಮ ಶೆಡ್ತೇರ ಕವರಿಗೆ ಲಭಿಸಿದೆ. ಕಂದಾವರ ಕೆಳಮನೆಯ ಮೇಲೆ ಉಲ್ಲೆಖಿಸಿದ ಸಮಸ್ತ ಕುಟುಂಬದವರ ಪೂರ್ವಜರು ಆರಾದಿಸಿದ “ವರ್ತೆ ಪಂಜುರ್ಲಿ” ನಶಿಸಿಹೋಗಿರುತ್ತದೆ ಎಂದು ವೈದಿಕರ ಮುಖೇನ ಆರೋಡ ಪ್ರಶ್ನೆಯಲ್ಲಿ ತಿಳಿದು ಬಂತು.